ಸಾಹಿತ್ಯ: ಕನಕದಾಸರು

ಈ ಸಾಹಿತ್ಯವನ್ನು ಭಕ್ತ ಕನಕದಾಸ ಚಲನಚಿತ್ರದಲ್ಲಿ ಉಪಯೋಗಿಸಲಾಗಿದೆ
ಗಾಯನ: ಪಿ.ಬಿ.ಶ್ರೀನಿವಾಸ್
ಸಂಗೀತ: ಎಂ.ವೆಂಕಟರಾಜು

ದೀನ ನಾನು ಸಮಸ್ತ ಲೋಕಕೆ ದಾನಿ ನೀನು 
ವಿಚಾರಿಸಲು ಮತಿ ಹೀನ ನಾನು
ಮಹಾಮಹಿಮ ಕೈವಲ್ಯ ಪತಿ ನೀನು
ಏನ ಬಲ್ಲೆನು ನಾನು? ಮೆರೆ ಸುಜ್ಞಾನಮೂರುತಿ ನೀನು
ನಿನ್ನ ಸಮಾನರುಂಟೆ ದೇವಾ?
ರಕ್ಷಿಸು ನಮ್ಮ ಅನವರತ
ದೇವಾ!
ದೇವಾ!
ದೇವಾ!

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ |೨|
ಕೂಗಿದರೂ ದನಿ ಕೇಳಲಿಲ್ಲವೇ
ನರಹರಿಯೇ ಬಾಗಿಲನು ತೆರೆದು

ಪರಮಪದದೊಳಗೆ ವಿಷಧರನತಲ್ಪದಲಿ ನೀ
ಸಿರಿಸಹಿತ ಕ್ಷೀರವಾರಿಧಿಯೊಳಿರಲು
ಕರಿರಾಜ ಕಷ್ಟದಲಿ
ಆದಿ ಮೂಲ ಎಂದು
ಕರೆಯಾಲಾಕ್ಷಣ ಬಂದು
ಒದಗಿದೆಯೋ 
ನರಹರಿಯೇ ಬಾಗಿಲನು ತೆರೆದು

ಕಡುಕೋಪದಿಂ ಖಳನು
ಖಡ್ಗವನೆ ಪಿಡಿದು
ನಿನ್ನೊಡೆಯ ಎಲ್ಲಿಹನೆಂದು ನುಡಿಯೇ
ಧೃಢ ಭಕುತಿಯಲಿ ಶಿಶುವು
ಬಿಡದೆ ನಿನ್ನನು ಭಜಿಸೇ
ಸಡಗರದಿ ಸ್ತಂಭದಿಂದೊಡೆದೆ
ನರಹರಿಯೇ ಬಾಗಿಲನು ತೆರೆದು

ಯಮಸುತನ ರಾಣಿಗೆ ಅಕ್ಷಯ ವಸನವನಿತ್ತೆ
ಸಮಯದಲಿ ಅಜಮಿಳನಪೊರೆದೆ
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿ ಕೇಶವನೇ
ಬಾಗಿಲನು ತೆರೆದು |೩|
ಸೇವೆಯನು ಕೊಡೊ ಹರಿಯೇ!

Category: ಕನಕದಾಸ ಸಾಹಿತ್ಯ
Category: ಭಕ್ತ ಕನಕದಾಸ ಚಿತ್ರ
Category: ಪಿ.ಬಿ.ಶ್ರೀನಿವಾಸ್ ಗಾಯನ
Category: ಕನ್ನಡ ಚಿತ್ರಸಾಹಿತ್ಯ